-->
ಉಳ್ಳಾಲ: ಸಂಚಾರದಲ್ಲಿದ್ದ ಬಸ್‌ನಲ್ಲಿಯೇ ಯುವತಿಗೆ ಲೈಂಗಿಕ ಕಿರುಕುಳ- ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ವಿಕೃತ ಕಾಮಿ ವೀಡಿಯೋದಲ್ಲಿ ಸೆರೆ

ಉಳ್ಳಾಲ: ಸಂಚಾರದಲ್ಲಿದ್ದ ಬಸ್‌ನಲ್ಲಿಯೇ ಯುವತಿಗೆ ಲೈಂಗಿಕ ಕಿರುಕುಳ- ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ವಿಕೃತ ಕಾಮಿ ವೀಡಿಯೋದಲ್ಲಿ ಸೆರೆ


ಉಳ್ಳಾಲ: ಸಂಚಾರದಲ್ಲಿದ್ದ ಬಸ್‌ನಲ್ಲಿಯೇ ಯುವತಿಗೆ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಲೈಂಗಿಕ ಕಿರುಕುಳ ನೀಡಿರುವ ವೀಡಿಯೋ ವೈರಲ್ ಆಗಿದೆ. ಈ ವೀಡಿಯೋ ವೈರಲ್ ಬೆನ್ನಲ್ಲೇ ವಿಕೃತ ಕಾಮಿ ಕಂಡಕ್ಟರ್ ಅಮಾನತು ಆಗಿದ್ದಾನೆ.

ಉಳ್ಳಾಲ 44A ಮುಡಿಪು ರೂಟ್ ಬಸ್ಸಿನಲ್ಲಿ ಈ ಘಟನೆ ನಡೆದಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ,  ಯುವತಿ ತೂಕಡಿಸುತ್ತಿದ್ದಳು. ಈ ವೇಳೆ ಪಕ್ಕದಲ್ಲಿ ನಿಂತಿದ್ದ ಬಸ್ ಕಂಡಕ್ಟರ್ ಪ್ರದೀಪ್ ಆಕೆಗೆ ಅರಿವಿಲ್ಲದಂತೆ ಆಕೆಯ ಖಾಸಗಿ ಅಂಗಕ್ಕೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ.

ಬಸ್ ಕಂಡಕ್ಟರ್ ಹೀನ ಕೃತ್ಯವನ್ನು ಸಹ ಪ್ರಯಾಣಿಕರು ಯಾರೋ ವೀಡಿಯೋ ಮಾಡಿದ್ದಾರೆ. ಈ ವಿಡಿಯೋ ವೈರಲ್ ಬೆನ್ನಲ್ಲೇ ವ್ಯಾಪಾಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಮಂಗಳೂರು ಕೆಎಸ್ಆರ್‌ಟಿಸಿ ಡಿಸಿ ರಾಜೇಶ್ ಶೆಟ್ಟಿಯವರು ಬಸ್ ಕಂಡಕ್ಟರ್ ಪ್ರದೀಪ್ ಅಮಾನತುಗೊಳಿಸಿ ಆದೇಶಿಸಿದ್ದಾರೆ‌.

Ads on article

Advertise in articles 1

advertising articles 2

Advertise under the article