ಬಂಟ್ವಾಳ: ಕಳವುಗೈದ ಜಾನುವಾರುಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ತಂದೆ - ಮಗ ಅಂದರ್
Saturday, July 2, 2022
ಬಂಟ್ವಾಳ : ಕಳವುಗೈದಿರುವ ಜಾನುವಾರುಗಳನ್ನು ಕಡಿದು ಮಾರುತ್ತಿದ್ದ ಅಡ್ಡೆಗೆ ದಾಳಿ ನಡೆಸಿರುವ ಬಂಟ್ವಾಳ ನಗರ ಪೋಲೀಸರು ತಂದೆ - ಮಗನನ್ನು ಬಂಧಿಸಿ ಸಾವಿರಾರು ರೂ. ಮೌಲ್ಯದ ಮಾಂಸವನ್ನು ವಶಕ್ಕೆ ಪಡೆದಿರುವ ಘಟನೆ ಜುಲೈ 1ರ ಮುಂಜಾನೆ ನಡೆದಿದೆ.
ಗೋಳ್ತಮಜಲು ನಿವಾಸಿಗಳಾದ ತಂದೆ - ಮಗ ಮಹಮ್ಮದ್ ಹಾಗೂ ಸಾದಿಕ್ ಬಂಧಿತ ಆರೋಪಿಗಳು.
ಗೋಳ್ತಮಜಲು ನಿವಾಸಿ ಮಹಮ್ಮದ್ ಎಂಬ ಆರೋಪಿಯು ಮನೆಯಲ್ಲಿಯೇ ಜಾನುವಾರುಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಬಗ್ಗೆ ಸ್ಥಳೀಯರಿಂದ ಬಂಟ್ವಾಳ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಇವರ ಮನೆಯಲ್ಲಿ ಕದ್ದು ತಂದಿರುವ ಜಾನುವಾರುಗಳನ್ನು ವಧೆ ಮಾಡಲಾಗುತ್ತಿತ್ತು. ಆ ಬಳಿಕ ಮಾಂಸ ಮಾಡಿ ಮಾರಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿ ಪೋಲಿಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಬಂಟ್ವಾಳ ಠಾಣೆಯ ಎಸ್‌ಐ ಅವಿನಾಶ್ ನೇತೃತ್ವದ ತಂಡ ನಿನ್ನೆ ಮುಂಜಾವಿನ ವೇಳೆ ದಾಳಿ ನಡೆಸಿ, ಮಾಂಸ ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.