-->
ಸಾಲ ವಸೂಲಿಗೆ ಬಂದಿದ್ದ ಬ್ಯಾಂಕ್ ಉದ್ಯೋಗಿಯೊಂದಿಗೇ ಓಡಿ ಹೋಗಿ ಮದುವೆಯಾದ ವಿವಾಹಿತೆ- ನಡೆದದ್ದೇನು ಗೊತ್ತೇ?

ಸಾಲ ವಸೂಲಿಗೆ ಬಂದಿದ್ದ ಬ್ಯಾಂಕ್ ಉದ್ಯೋಗಿಯೊಂದಿಗೇ ಓಡಿ ಹೋಗಿ ಮದುವೆಯಾದ ವಿವಾಹಿತೆ- ನಡೆದದ್ದೇನು ಗೊತ್ತೇ?

ಬಿಹಾರ: ಸಾಲ ವಸೂಲಿಗೆ ಬಂದಿದ್ದ ಬ್ಯಾಂಕ್ ಉದ್ಯೋಗಿಯೊಂದಿಗೇ ವಿವಾಹಿತೆಯೊಬ್ಬಳು ಓಡಿಹೋಗಿ ಮದುವೆಯಾಗಿರುವ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ.

ಬಿಹಾರದ ಜುನಾಯಿ ಮುನ್ಸಿಪಾಲ್‌ ಕೌನ್ಸಿಲ್‌ನ ತ್ರಿಪುರಾರ್ ಸಿಂಗ್ ಘಾಟ್‌ ನಿವಾಸಿ ಇಂದ್ರ ಕುಮಾರಿ ವಿವಾಹಿತ ಮಹಿಳೆ. ಇಲ್ಲಿನ ಲಚುವಾಲ್ ಪೊಲೀಸ್‌ ಠಾಣೆ ವ್ಯಾಪ್ತಿಯ ಜಜ್ಜಾಲ್ ಗ್ರಾಮ ನಿವಾಸಿ ಬ್ಯಾಂಕ್ ಉದ್ಯೋಗಿ ಪವನ್ ಕುಮಾರ್ ಆಕೆಯನ್ನು ಮದುವೆಯಾದವನು. 

ಇಂದ್ರ ಕುಮಾರಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದಳು. ಈ ಸಾಲದ ಹಣ ಪಡೆಯಲು ಬ್ಯಾಂಕ್ ಉದ್ಯೋಗಿ ಪವನ್ ಕುಮಾರ್ ಆಕೆಯ ಮನೆಗೆ ಹೋಗುತ್ತಿದ್ದನು. ಈ ಸಂದರ್ಭ ಇಬ್ಬರ ನಡುವೆ ಪ್ರೀತಿ ಮೊಳೆತಿದೆ. ಕಳೆದ 5 ತಿಂಗಳಿಂದ ಇಬ್ಬರೂ ರಹಸ್ಯವಾಗಿ ಭೇಟಿಯಾಗುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇದೀಗ ಇವರ ವಿವಾಹದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಂದ್ರ ಕುಮಾರಿ ಹಾಗೂ ಪವನ್ ಕುಮಾರ್ ಮದುವೆ  ಮಂಗಳವಾರ(ಫೆ.11) ರಂದು ನಡೆದಿದೆ. ಇಬ್ಬರೂ ತ್ರಿಪುರಾರ್ ಸಿಂಗ್ ಘಾಟ್‌ನ ಬಾಬಾ ಭೂಥೇಶ್ವರ್‌ನಾಥ್ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. 

ಪವನ್ ಕುಮಾರ್ ಬ್ಯಾಂಕ್ ಆಕೌಂಟ್ ಸೆಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದನು. ವಿವಾಹಿತೆಯಾದ ಇಂದ್ರ ಕುಮಾರಿ ಆತನಿದ್ದ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದಳು. ಈ ಸಾಲ ವಸೂಲಾತಿಗಾಗಿ ಪವನ್ ಆಗಾಗ್ಗೆ ಇಂದ್ರಕುಮಾರಿ ಮನೆಗೆ ಭೇಟಿ ನೀಡುತ್ತಿದ್ದ. ಈ ಸಂದರ್ಭದಲ್ಲಿ ಇಂದ್ರ ಕುಮಾರಿ ಹಾಗೂ ಪವನ್‌ ಪ್ರೀತಿಸಲಾರಂಭಿಸಿದ್ದಾರೆ‌. ಇಬ್ಬರೂ ಮೊಬೈಲ್ ಕರೆಗಳಲ್ಲಿ ಗಂಟೆಗಟ್ಟಲೆ ಮಾತನಾಡಲು ಪ್ರಾರಂಭಿಸಿದರು. ಅವರಿಬ್ಬರೂ ಸುಮಾರು ಐದು ತಿಂಗಳುಗಳ ಕಾಲ ರಹಸ್ಯವಾಗಿ ಭೇಟಿಯಾಗುತ್ತಲೇ ಇದ್ದರು. ಫೆಬ್ರವರಿ 4ರಂದು ಇಂದ್ರ ಕುಮಾರಿ ತನ್ನ ಪತಿಯನ್ನು ತೊರೆದು ಪವನ್ ಕುಮಾ‌ರ್‌ನೊಂದೊಗೆ ಓಡಿಹೋಗಿದ್ದಳು ಎಂದು ವರದಿಯಾಗಿದೆ.

ಇಂದ್ರ ಕುಮಾರಿ 2022ರಲ್ಲಿ ವಿವಾಹವಾಗಿದ್ದಳು. ಆಕೆಯ ಪತಿ ಮದ್ಯದಚಟ ಹೊಂದಿದ್ದನು. ಅಲ್ಲದೆಮ ಮದ್ಯ ಸೇವಿಸಿ ಬಂದ ಆತ ಆಕೆಯನ್ನು ಹೊಡೆಯುತ್ತಿದ್ದನು. ಇದರಿಂದಾಗಿ ಆಕೆಗೆ ಬ್ಯಾಂಕ್‌ ಉದ್ಯೋಗಿಯೊಂದಿಗೆ ಆಪ್ತತೆ ಹೆಚ್ಚಾಯಿತು. ಕೊನೆಗೆ ಇಬ್ಬರೂ ಒಟ್ಟಿಗೆ ಇರಲು ನಿರ್ಧರಿಸಿ ಮದುವೆಯಾದರು. ಮದುವೆಯ ಬಳಿಕ ಇಂದ್ರ ಕುಮಾರಿ ತನ್ನ ಮಾಜಿ ಪತಿ ಮತ್ತು ಕುಟುಂಬ ಸದಸ್ಯರಿಂದ ಜೀವ ಬೆದರಿಕೆ ಎದುರಿಸುತ್ತಿರುವುದಾಗಿ ಹೇಳಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ.

Ads on article

Advertise in articles 1

advertising articles 2

Advertise under the article